ಅಭಿಪ್ರಾಯ / ಸಲಹೆಗಳು

ತೋಟಗಾರಿಕಾ ಉತ್ಪನ್ನಗಳ ಮಾರಾಟ ಮತ್ತು ರಫ್ತು ವ್ಯವಹಾರಗಳ ಮಾಹಿತಿ ಕೇಂದ್ರ

ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯಬಾಗಲಕೋಟ

ರಾಕೃವಿಯೊ ಪ್ರಾಯೋಜಿತ

ತೋಟಗಾರಿಕಾ ಉತ್ಪನ್ನಗಳ ಮಾರಾಟ ಮತ್ತುರಫ್ತು

ವ್ಯವಹಾರಗಳ ಮಾಹಿತಿ ಕೇಂದ್ರ

ಮಾರಾಟ ಮಾಹಿತಿ ಮಾರ್ಗದರ್ಶಿ

 

ವಿಶ್ವವಿದ್ಯಾಲಯದ ಬಗ್ಗೆ :

ಕರ್ನಾಟಕ ರಾಜ್ಯವು ತೋಟಗಾರಿಕಾ ಬೆಳೆಗಳನ್ನು ಬೆಳೆಯುವಲ್ಲಿ ಮುಂಚೂಣಿಯಲ್ಲಿದ್ದು, ಪೂರ್ಣ ಪ್ರಮಾಣದ ತೋಟಗಾರಿಕೆ ಇಲಾಖೆಯನ್ನು ಹೊಂದಿರುವ ಪ್ರಥಮ ರಾಜ್ಯವಾಗಿದೆ. ಅಲ್ಲದೇ,  ರಾಜ್ಯದ ತೋಟಗಾರಿಕಾ ಬೆಳೆಗಳ ಉತ್ಪಾದಕತೆಯು ರಾಷ್ಟಿçÃಯ ಸರಾಸರಿಗಿಂತ ಹೆಚ್ಚಿದೆ. ಕರ್ನಾಟಕದಲ್ಲಿಯ ತೋಟಗಾರಿಕೆ ಬೆಳೆಗಳ ಪ್ರಾಮುಖ್ಯತೆಯನ್ನು ಮನಗಂಡು ಸಂಶೋಧನೆ ಮತ್ತು ಅವಶ್ಯಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಮಾನ್ಯ ಸರಕಾರವು ವಿಶೇಷ ಆದೇಶ (೨೦೦೮ರ ನಂ.೨) ೨೨-೧೧-೨೦೦೮ ರ ಮುಖೇನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಬಾಗಲಕೋಟದಲ್ಲಿ ಸ್ಥಾಪಿಸಿತು. ಬಾಗಲಕೋಟ ಜಿಲ್ಲೆಯಲ್ಲಿ ದ್ರಾಕ್ಷಿ, ದಾಳಿಂಬೆ, ಬಾಳೆ, ಚಿಕ್ಕು, ಬಾರೆಹಣ್ಣು, ವಿವಿಧ ರೀತಿಯ ತರಕಾರಿಗಳು, ವೀಳ್ಯದೆಲೆ, ತೆಂಗು, ಸಾಂಬಾರು ಬೆಳೆಗಳು ಮತ್ತು ಜೌಷಧೀಯ ಹಾಗೂ ಸುಗಂಧಿತ ಬೆಳೆಗಳ ಉತ್ಪಾದನೆಯನ್ನು ಪರಿವೀಕ್ಷಿಸಿ ಜಿಲ್ಲೆಯನ್ನು ವಿಶ್ವವಿದ್ಯಾಲಯದ ಕೇಂದ್ರಸ್ಥಾವನ್ನಾ ಗಿಸಿರುವುದು ಸಮಂಜಸವಾಗಿದೆ.

 ತೋಟಗಾರಿಕಾ ಬೆಳೆಗಳ ಸ್ಥಿತಿಗತಿ:

ಕರ್ನಾಟಕವು ಭಾರತ ದೇಶದಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.ರಾಜ್ಯವು ೧೦ ವಿವಿಧ ಕೃಷಿ ಹವಾಮಾನ ವಲಯಗಳನ್ನು ಹೊಂದಿದ್ದು, ವಿವಿಧ ಲಾಭದಾಯಕ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದಾಗಿದೆ. ಕರ್ನಾಟಕದ ಒಟ್ಟು ಭೌಗೋಳಿಕ ಕ್ಷೇತ್ರ ೧೯೦.೫೦ ಲಕ್ಷ ಹೆಕ್ಟರ್‌ಗಳಿಷ್ಟಿದ್ದು, ಅದರಲ್ಲಿ ೧೨೧.೮೬ ಲಕ್ಷ ಹೆಕ್ಟರ್ (೬೩.೯೭%) ಮಾತ್ರ ಕೃಷಿ ಸಾಗುವಳಿಗೆ ಯೋಗ್ಯವಾಗಿದೆ. ರಾಜ್ಯದಲ್ಲಿನ ವೈವಿಧ್ಯಮಯ ಕೃಷಿ ಹವಾಮಾನ, ಮಣ್ಣಿನ ಲಕ್ಷಣ ಮತ್ತು ಗುಣಗಳು ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅಪಾರ ಅವಕಾಶಗಳನ್ನು ಒದಗಿಸಿಕೊಡುತ್ತವೆ. ತೋಟಗಾರಿಕೆ ವಲಯವು ಉತ್ತಮ ಉದ್ಯೋಗದ ಅವಕಾಶಗಳನ್ನು ಒದಗಿಸುವ ಸಮರ್ಥ ಉದ್ಯಮವಾಗಿದೆ. ಇದು ನೀರಾವರಿ ಹಾಗೂ ಖುಷ್ಕಿ ಬೇಸಾಯ ಎರಡಕ್ಕೂ ಅತ್ಯುತ್ತಮ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.ಒಟ್ಟು ಕೃಷಿ ಸಾಗುವಳಿ ಕ್ಷೇತ್ರದ ಶೇ.೧೪ ರಷ್ಟನ್ನು ಮಾತ್ರ ಆವರಿಸಿಕೊಂಡಿರುವ ತೋಟಗಾರಿಕೆ ಬೆಳೆಗಳು ಸಂಯೋಜಿತ ಕೃಷಿ ಉತ್ಪನ್ನಗಳ ಶೇ.೪೦ ರಷ್ಟು ಆದಾಯವನ್ನು ಮತ್ತು ಶೇ.೧೭ ರಷ್ಟು ರಾಜ್ಯದ ಜಿ.ಡಿ.ಪಿ ಗೆ ಕೊಡುಗೆ ನೀಡುತ್ತಿದ್ದು, ರೈತರ ಆದಾಯದ ಮಟ್ಟವನ್ನು ಸುಧಾರಿಸಿ ರಾಜ್ಯದ ಆರ್ಥಿಕ ಮಟ್ಟವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ಇತ್ತೀಚನ ದಿನಗಳಲ್ಲಿ ರೈತರ ಸಮಸ್ಯೆಗಳು ಕೇವಲ ಉತ್ಪಾದನಾ ತಂತ್ರಜ್ಞಾನಗಳಿಗೆ ಮಾತ್ರ ಸೀಮಿತವಾಗಿರದೇ, ಮಾರುಕಟ್ಟೆ ಅಂಶಗಳ ನಿರ್ವಹಣೆಗೂ ವಿಸ್ತರಿಸುತ್ತಿವೆ. ವಾಸ್ತವಿಕವಾಗಿ ಮಾರುಕಟ್ಟೆ ಸಮಸ್ಯೆಗಳು ಉತ್ಪಾದನಾ ಸಮಸ್ಯೆಗಳಿಗಿಂತ ಹೆಚ್ಚಾಗಿವೆ. ಐತಿಹಾಸಿಕವಾಗಿ ಭಾರತೀಯ ಕೃಷಿಯು ಎದುರಿಸುತ್ತಿರುವ ಒಂದು ಸಮಸ್ಯೆಯೆಂದರೆ ಕೃಷಿ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ ವ್ಯಸಸ್ಥೆ ಇಲ್ಲದಿರುವುದು. ಇದರಿಂದ ರೈತರುತಾವು ಬೆಳೆದ

ಬೆಳೆಗಳನ್ನು ಯಾವಾಗ ಬೇಕಾದರೂ ಮಾರಾಟ ಮಾಡಬಹುದೆಂಬ ಕಲ್ಪನೆ ಕುಂಠಿತವಾಗುತ್ತಿದೆ.ಅಲ್ಲದೇ, ರೈತರು ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳಲು ಪರಿಣಾಮಕಾರಿ ಮಾರುಕಟ್ಟೆ ತಂತ್ರಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಆದರೆ ಇಂದಿನ ಭಾರತೀಯ ಕೃಷಿಯು ಒಂದು ಗ್ರಾಹಕರ ಮಾರುಕಟ್ಟೆಯಾಗಿದ್ದು, ಅಲ್ಲಿ ಗ್ರಾಹಕರು ಮೌಲ್ಯವರ್ಧಿತ ಸರಕುಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಗ್ರಾಹಕರ ಪ್ರಜ್ಞಾಮಟ್ಟ ವಿವಿಧ ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಸಾಮಾನ್ಯವಾಗಿ ಹಾಗೂ ನಿರ್ದಿಷ್ಟ ಆಹಾರ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಕಡಿಮೆ ಅಥವಾ ವಿಶಾಂಶವಿಲ್ಲದ,ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ರಫ್ತಿಗೆ ಅವಕಾಶಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಭಾರತೀಯ ತೋಟಗಾರಿಕೆ ಉತ್ಪದಾನೆಯು ಜಾಗತಿಕವಾಗಿ ಸಮರ್ಥವಾಗಬೇಕಾಗಿದೆ. ಇದಕ್ಕಾಗಿ ರೈತರು ಗುಣಮಟ್ಟದ ಉತ್ಪಾದನೆ, ವರ್ಗೀಕರಣ, ಆಕರ್ಷಕ ಪ್ಯಾಕೇಜಿಂಗ್, ದಕ್ಷವಾದ ಸಾಗಾಣಿಕೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಮರ್ಥ ವಿಧಾನಕ್ಕೆ ಸಜ್ಜಾಗಬೇಕಾಗಿದೆ.ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಗ್ರಾಮೀಣ ಮಾರುಕಟ್ಟೆಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ.

ತೋಟಗಾರಿಕಾ ಉತ್ಪನ್ನಗಳ ಮಾರಾಟ ಮತ್ತು ರಫ್ತು ವ್ಯವಹಾರಗಳ ಮಾಹಿತಿ ಕೇಂದ್ರ:

ತೋಟಕಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಅಧೀನದಲ್ಲಿ ತೋಟಗಾರಿಕಾ ಉತ್ಪನ್ನಗಳ ಮಾರಾಟ ಮತ್ತು ರಫ್ತು ವ್ಯವಹಾರಗಳ ಮಾಹಿತಿ ಕೇಂದ್ರವನ್ನು ಈ ಕೆಳಗಿನ ನಿರ್ದಿಷ್ಟ ಗುರಿಗಳೊಂದಿಗೆ ಸ್ಥಾಪಿಸಲಾಗಿದೆ.

೧. ತೋಟಗಾರಿಕಾ ಉತ್ಪನ್ನಗಳ ಮಾರುಕಟ್ಟೆಯ ಅಧ್ಯಯನ ನಡೆಸಿ ರೈತರಿಗೆ ವಿಷಯಾಧಾರಿತ ಬೆಂಬಲವನ್ನು ಒದಗಿಸುವುದು.

೨. ತೋಟಗಾರಿಕಾಉತ್ಪನ್ನಗಳ ಮಾರಾಟಗಾರಿಕೆಗೆ ಅಗತ್ಯವಿರುವ ವಿವಿಧ ಸಂಶೋಧನಾ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು.

೩. ಮಾರುಕಟ್ಟೆ ಇಲಾಖೆಯೊಂದಿಗೆ ಜಂಟಿಯಾಗಿ ಪ್ರತ್ಯೇಕ ಜಾಲತಾಣವನ್ನು ಸ್ಥಾಪಿಸಿ ರೈತರಿಗೆ ಉತ್ಪಾದನೆ, ಸಂಸ್ಕರಣೆ ಮತ್ತು ವಿವಿಧ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆ ಕುರಿತಾಗಿ ಮಾಹಿತಿ ಒದಗಿಸುವುದು.

೪. ರೈತರಿಗೆ ಮತ್ತು ಉದ್ಯಮದಾರರಿಗೆ ಔಚಿತ್ಯಪೂರ್ಣವಾದ ತರಬೇತಿಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು.

೫. ತೋಟಗಾರಿಕಾ ಉತ್ಪನ್ನಗಳನ್ನು ರಫ್ತು ಮಾಡಲು ಅವಶ್ಯವಿರುವ ಪೂರಕ ಕ್ರಮಗಳನ್ನು ಕೈಗೊಂಡು ರಫ್ತಿಗಾಗಿ ವೇದಿಕೆ ಸಿದ್ದಪಡಿಸುವುದು.

೬. ರೈತರಿಗೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ವಿಸ್ತರಣೆ ಮತ್ತು ಮಾರುಕಟ್ಟೆ ಕುರಿತಾಗಿ ಬೆಂಬಲಿಸುವುದು.

ಅನುಷ್ಠಾನ ವಿಧಾನ : ವಿಶ್ವವಿದ್ಯಾಯದ ವಿಜ್ಞಾನಿಗಳ ತಂಡವು ಅನುಮೋದಿತ ಯೋಜಿತ ಚಟುವಟಿಕೆಗಳನ್ನು ಸಂಚಾಲಕ ಸಮಿತಿಯ ಮೇಲ್ವಿಚಾರಣೆಯಲ್ಲಿ ಅನುಷ್ಠಾನಗೊಳಿಸುತ್ತಿದೆ.ಸದರಿ ಕೇಂದ್ರವು ಈ ಕೆಳಗಿನ ವಿವಿಧ ಚಟುವಟಿಕೆಗಳ ಮೂಲಕ ಆರಂಭವಾಗುತ್ತಿದೆ.

  ಬೆಳೆ ಯೋಜನೆ:

ಲಭ್ಯತೆ ಮತ್ತು ಬೇಡಿಕೆ ಆಧಾರಿತ, ಋತುವಾರು ಹಾಗೂ ಪ್ರದೇಶಾಧಾರಿತ, ಕರ್ನಾಟಕ ರಾಜ್ಯದ ಹಾಗೂ ಹೊರರಾಜ್ಯದ ಮಾರುಕಟ್ಟೆಗಳನ್ನು ವಿಶ್ಲೇಷಿಸಿ ಬೆಳೆ ಯೋಜನೆಗಳನ್ನು ರೂಪಿಸುವುದರಿಂದ ಸ್ಥಳೀಯ  ಬೇಡಿಕೆಯಲ್ಲದೇ ಸಮೀಪದ ರಾಜ್ಯದ ಬೇಡಿಕೆಗಳನ್ನು ಲಾಭದಾಯಕವಾಗಿಸುವುದು.

ಮಾಹಿತಿ ಕೊಂಡಿ:

ತೋಟಗಾರಿಕಾ ಮಾರಾಟ ಸರಪಳಿಯ ಮಾಹಿತಿಯನ್ನು ತಕ್ಷಣ ಮತ್ತು ನಿಖರವಾಗಿ ಒಟ್ಟುಗೂಡಿಸುವುದು. ಇದರಿಂದ ರೈತರಿಗೆ, ಖರೀದಿದಾರರಿಗೆ ಮತ್ತು ಮಧ್ಯವರ್ತಿಗಳಿಗೆ ಒಂದೇ ಸೂರಿನಡಿ ಮಾಹಿತಿ ಲಭ್ಯವಾಗುವಂತೆ ಮಾಡಬಹುದಾಗಿದೆ.ಈ ರೀತಿಯ ಸೂಕ್ತವಾದ ಬಿತ್ತನೆ, ಕೋಯ್ಲು ಮತ್ತು ಮಾರುಕಟ್ಟೆ ನಿರ್ಧರಿಸುವ ನಿಖರವಾದ ಮಾಹಿತಿಗಳು ರೈತರಿಗೆ ಬೆನ್ನಲುಬಾಗಿ ವರ್ತಿಸುತ್ತವೆ.

ಉತ್ಪಾದನೆ ಮತ್ತು ಬೃಹತ್ ಮಾರಾಟ/ರಫ್ತು ಮತ್ತು ಸಾಗಾಣಿಕೆ:

ಉತ್ಪಾದಕ ಕಂಪನಿಗಳ ಸ್ಥಾಪನೆ, ದೊಡ್ಡ ಮಾರುಕಟ್ಟೆ ಮತ್ತು ಸಮೂಹಗಳ ಮೂಲಕ ಮಾರಾಟ ಮಾಡುವ ಕುರಿತಾಗಿ ರೈತರಿಗೆ ಜಾಗೃತಿ ಮೂಡಿಸುವುದು, ಒಟ್ಟೂಗೂಡಿಸಿದ ರೈತರಿಗೆ ಉತ್ತಮ ಕೃಷಿ ವಿಧಾನಗಳು, ಶ್ರೇಣೀಕರಣ, ವಿಂಗಡಣೆ, ಪ್ಯಾಕೇಜಿಂಗ್ ಮತ್ತು ಸಾಗಾಣಿಕೆಗಳಲ್ಲಿನ ಇತ್ತೀಚಿನ ಆವಿಷ್ಕಾರಗಳನ್ನು ತರಬೇತಿಗಳ ಮೂಲಕ ತಿಳಿಸುವುದು.

ಬೆಳೆ ಸಂಬಂಧಿತ ನಾವೀನ್ಯತೆಗಳು : ಮಾರುಕಟ್ಟೆ ಜ್ಞಾನಜಾಲದ ಮೂಲಕ ನಿರ್ದಿಷ್ಟ ಬೆಳೆಗಳಲ್ಲಿನ ನಾವೀನ್ಯತೆಗಳು, ಸಮೂಹ ಆಧಾರಿತ ಗುಂಪು ಮಾರಾಟ, ನಿಯಂತ್ರಿತ ಮಾರಾಟದಮಾಹಿತಿಯನ್ನು ಒದಗಿಸುವುದು.

 ತೋಟಗಾರಿಕಾ ಉತ್ಪನ್ನಗಳ ನೇರ ಮಾರಾಟ ಇತರೇ ರಾಜ್ಯಗಳಲ್ಲಿ ಜಾರಿಯಲ್ಲಿರುವ ವಿವಿಧ ಪ್ರಾಯೋಗಿಕ ಮಾದರಿಗಳನ್ನು ಪರಿಶೀಲಿಸಿ ರಾಜ್ಯದಲ್ಲಿ ಅನ್ವಯವಾಗುವ ಮಾದರಿಗಳನ್ನು ಜನಪ್ರಿಯಗೊಳಿಸುವುದು.

ಪ್ರಮುಖ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಅವಕಾಶವಿವಿಧ ತೋಟಗಾರಿಕಾ ಬೆಳೆಗಳ ಮೌಲ್ಯವರ್ಧನೆಗೆ ಲಭ್ಯವಿರುವ ಸೌರಡ್ರೆöÊಯರ್‌ಗಳು, ಅವುಗಳ ಕಾರ್ಯ ಸಾಮರ್ಥ್ಯ, ತಗಲುವ ವೆಚ್ಚಗಳೊಂದಿಗೆ ಮೌಲ್ಯವರ್ಧನೆ ಮಾಹಿತಿ, ವೆಚ್ಚ ವಿವರಗಳು ಇತ್ಯಾದಿ ಮಾಹಿತಿಗಳನ್ನು ಒದಗಿಸುವುದು.

ಸಂಭಾವ್ಯ ಫಲಿತಾಂಶಗಳು :

  • ರೈತರಿಗೆ ಬಲವಾದ ಮಾರುಕಟ್ಟೆ ಕೊಂಡಿಗಳ ಲಭ್ಯತೆ.
  • ಮಾರಾಟದಲ್ಲಿ ನುರಿತ ಮಾನವ ಸಂಪನ್ಮೂಲ.
  • ತೋಟಗಾರಿಕಾ ಬೆಳೆಗಳ ಮಾರುಕಟ್ಟೆ ಮತ್ತು ರಫ್ತು ಕುರಿತಾದ ಅಂಕಿಅAಶಗಳ ಲಭ್ಯತೆ.
  • ಮಾರುಕಟ್ಟೆ ಕುರಿತಾದ ಇತ್ತೀಚಿನ ಮಾಹಿತಿಗಳ ಲಭ್ಯತೆ.
  • ಮಾರುಕಟ್ಟೆ ಮತ್ತು ರಫ್ತು ಕುರಿತಾದ ತರಬೇತಿ ಸೌಲಭ್ಯಗಳ ಲಭ್ಯತೆ.

ಇತ್ತೀಚಿನ ನವೀಕರಣ​ : 30-08-2021 11:14 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080