ವಿಸ್ತರಣಾ ನಿರ್ದೇಶಕರು
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,
ಉದ್ಯಾನಗಿರಿ, ಬಾಗಲಕೋಟ - 587 104
ಪೋನ್ ನಂಬರ: 08354 - 230101, Fax: 08354 – 230125 , +91- 94806 96381/9448626627 (Cell)
ಮಿಂಚಂಚೆ : de@uhsbagalkot.edu.in
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯವು ರೈತರಿಗೆ ಹೊಸ ತಂತ್ರಜ್ಞಾನಗಳನ್ನು ತಲುಪಿಸುವಲ್ಲಿ ಕ್ರಿಯಾಶೀಲವಾಗಿ ನಿರಂತರವಾಗಿ ತೊಡಗಿಸಿಕೊಂಡಿದೆ. ಜೊತೆಗೆ ಸಂಶೋಧನೆಗೆ ತನ್ನದೇ ಆದ ಕೊಡುಗೆ ನೀಡುವಲ್ಲಿ ನಿರತವಾಗಿದೆ. ತೋಟಗಾರಿಕೆ ಬೆಳೆಗಳ ಉತ್ಪಾದನೆ, ಉತ್ಪಾದಕತೆ ಹೆಚ್ಚಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ವಿಸ್ತರಣಾ ಚಟುವಟಿಕೆಗಳನ್ನು ‘ರೈತ-ಕೇಂದ್ರಿತ’ ಮತ್ತು ‘ಮಾರುಕಟ್ಟೆ-ಆಧಾರಿತ’ವಾಗಿ ಮಾಡುವುದು ವಿಸ್ತರಣಾ ನಿರ್ದೇಶನಾಲಯದ ಪ್ರಮುಖ ಗುರಿಯಾಗಿದೆ.
ಪ್ರಮುಖ ಧ್ಯೇಯೋದ್ದೇಶಗಳು
• ವಿವಿಧ ತೋಟಗಾರಿಕೆ ಬೆಳಗಳ ಸಮರ್ಥ ಉತ್ಪಾದನ ಪ್ರದೇಶಗಳನ್ನು ಗುರುತಿಸುವುದು.
• ಪ್ರಗತಿಪರ ರೈತರು ಮತ್ತು ಇತರೇ ರೈತರ ಇಳುವರಿಯನ್ನು ಮೌಲ್ಯಮಾಪನ ಮಾಡುವುದು.
• ಅಧಿಕ ಆದಾಯವನ್ನು ಪಡೆಯುವ ಗುರಿಯನ್ನು ಹೊಂದಲು ಹಣ್ಣಿನ ತೋಟಗಳಲ್ಲಿ ಸೂಕ್ತವಾಗಿರುವ ಅಂತರಬೆಳೆಗಳಿAದ ಸಮಗ್ರ ಕೃಷಿ ಪದ್ಧತಿಯ ಬೆಳೆಗಳನ್ನು ವೃದ್ಧಿಸುವುದು
• ವಿವಿಧ ಬೆಳೆಗಳಲ್ಲಿ ಸುಸ್ಥಿರ ಇಳುವರಿಯ ಪಡೆಯಲು ಸೂಕ್ತವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡುವುದು
• ಪರಿಣಾಮಕಾರಿಯಾದ ತಂತ್ರಜ್ಞಾನಗಳನ್ನು ರವಾನಿಸುವುದು ಹಾಗೂ ರೈತರಿಂದ ಪ್ರತ್ಯುತ್ತರ ಪಡೆಯುವುದು ಮತ್ತು ತಂತ್ರಜ್ಞಾನಗಳ ಅಳವಡಿಕೆಯ ಮಟ್ಟದಲ್ಲಿ ನ್ಯೂನತೆಗಳ ಅಧ್ಯಯನ ಮಾಡುವುದು.
• ಅನುಭವಿ ರೈತರು, ವಿಸ್ತರಣಾ ತಜ್ಞರು ಮತ್ತು ವಿಷಯಾಧಾರಿತ ತಜ್ಞರನ್ನೊಳಗೊಂಡ ಸಲಹಾ ಸಮಿತಿಯನ್ನು ರಚಿಸುವುದು
• ಪ್ರಗತಿಪರ ರೈತರ ಕ್ಷೇತ್ರಗಳ ಅವಲೋಕನೆಗಾಗಿ ಕ್ಷೇತ್ರಭೇಟಿಗಳನ್ನು ಸಂಘಟಿಸುವುದು
• ಕೃಷಿ ಸಾಮರ್ಥ್ಯವನ್ನು ಹೆಚ್ಚಿಸಲು ತರಬೇತಿಗಳನ್ನು ಮತ್ತು ಕೌಶಲ್ಯಾಭಿವೃದ್ಧಿ, ಸಂಪನ್ಮೂಲ ಮಾರುಕಟ್ಟೆ ನಿರ್ವಹಣೆ, ಸುಧಾರಿತ ಕೃಷಿ, ಕೊಯ್ಲೋತ್ತರ ತಂತ್ರಜ್ಞಾನ ಮತ್ತು ನಿರ್ವಹಣಾ ಕೌಶಲ್ಯಗಳನ್ನು ನೆರವೇರಿಸುವುದು
• ಕೃಷಿ ಉತ್ಪಾದನೆಗಳನ್ನು ಮಾರುವವರ ಮತ್ತು ಕೊಳ್ಳುವವರ ಪರಸ್ಪರ ಸಂವಾದಗಳನ್ನು ಸಂಘಟಿಸುವುದರ ಮೂಲಕ ಮಾರುಕಟ್ಟೆಗಳನ್ನು ಒದಗಿಸುವುದು
• ಉತ್ಪಾದನೆಯನ್ನು ಅಭಿವೃದ್ಧಿ ಪಡಿಸುವುದು ಮತ್ತು ಬೇಡಿಕೆಯಾಧಾರಿತ ಮುನ್ಸೂಚನಾ ಮಾದರಿಗಳ ಮಾರುಕಟ್ಟೆಗಳನ್ನು ಒದಗಿಸುವುದು
• ರೈತ ಸಮುದಾಯಗಳನ್ನು ಮತ್ತು ಉತ್ಪಾದಕರ ಕಂಪನಿಗಳು, ಸಂರಕ್ಷಣೆ, ಸಂಗ್ರಹ ಮಾರುಕಟ್ಟೆ ಅಂಶಗಳನ್ನು ಸಂಘಟಿಸುವುದು
ವಿಸ್ತರಣಾ ಧ್ಯೇಯೋದ್ದೇಶಗಳು
ವಿಶ್ವವಿದ್ಯಾಲಯಗಳು ಮತ್ತು ಇತರೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಗಳ ಮೂಲಕ ಎಲ್ಲಾ ತೋಟಗಾರಿಕೆಯ ಪಾಲುದಾರರಿಗೆ ತರಬೇತಿಗಳು, ಪ್ರಾತ್ಯಕ್ಷಿಕೆಗಳು, ವಿಚಾರ ಸಂಕಿರಣಗಳು, ಪ್ರಕಟಣೆಗಳು, ವಸ್ತು ಪ್ರದರ್ಶನಗಳು, ಮೇಳಗಳು ಮುಂತಾದವುಗಳ ಮೂಲಕ ಕೃಷಿ ತಂತ್ರಜ್ಞಾನಗಳನ್ನು ಪ್ರಸರಿಸುವುದು. ತೋಟಗಾರಿಕೆ ಕ್ಷೇತ್ರದಲ್ಲಿಯ ಅಭಿವೃದ್ಧಿಯನ್ನು ಗುರುತಿಸುವಲ್ಲಿ ತೋವಿವಿ ವಿಜ್ಞಾನಿಗಳು, ಪತ್ರಿಕಾ ಮಾಧ್ಯಮ, ಸಮೂಹ ಮಾಧ್ಯಮ, ಜಾಲತಾಣಗಳು, ಕ್ಷೇತ್ರಭೇಟಿ ಮತ್ತು ಇ-ವಿಸ್ತರಣೆಗಳು ಜವಾಬ್ದಾರಿಯನ್ನು ಹೊತ್ತಿವೆ.
ಪರಿಣಾಮಕಾರಿ ತಂತ್ರಜ್ಞಾನಗಳ ವರ್ಗಾವಣೆ ಮತ್ತು ರೈತರಿಂದ ಪ್ರತಿಕ್ರಿಯೆಗಳನ್ನು ಪಡೆಯುವುದು
ಜ್ಞಾನ ಮತ್ತು ತಂತ್ರಜ್ಞಾನಗಳ ಪ್ರಸಾರಕ್ಕಾಗಿ ವಿಜ್ಞಾನಿಗಳು ಮತ್ತು ತಂತ್ರಜ್ಞಾನಗಳ ಸಂವಾದಗಳನ್ನು ಏರ್ಪಡಿಸುವುದು
ರೈತರ ಸದುಪಯೋಗಕ್ಕಾಗಿ ಸ್ಥಳೀಯ ಭಾಷೆಯಲ್ಲಿ ಪ್ರಕಟಣೆಗಳನ್ನು ಪ್ರಕಟಿಸುವುದು.
ರೈತ ಕೇಂದ್ರಿತ ವಿಸ್ತರಣೆಯನ್ನು ಸಂಘಟಿಸುವುದು ಮತ್ತು ಕೃಷಿ ಸಮುದಾಯ ಗುಂಪುಗಳು ಮತ್ತು ಕೃಷಿ ಉತ್ಪಾದಕರ ಕಂಪನಿಗಳಿಗೆ ಉತ್ತೇಜಿಸುವುದು
ನಿರ್ದಿಷ್ಟ ಸ್ಥಳವನ್ನು ರೂಪಿಸಿದ ಮತ್ತು ಬೇಡಿಕೆಯಾಧಾರಿತ ಸಂಶೋಧನಾ ಕರ‍್ಯಕ್ರಮಗಳಲ್ಲಿ ಸಂಶೋಧನಾರ್ಥಿಗೆ ಅಭಿಪ್ರಾಯಗಳನ್ನು ಒದಗಿಸುವುದು
ಪರಿಣಾಮಕಾರಿ ತಂತ್ರಜ್ಞಾನದ ವರ್ಗಾವಣೆಗಾಗಿ ಫಲಿತಾಂಶ ಮತ್ತು ಪದ್ಧತಿ ಪ್ರಾತ್ಯಕ್ಷಿಕೆಗಳನ್ನು ಸಂಘಟಿಸುವುದು
ಸಣ್ಣ ಮತ್ತು ಬೃಹತ್ ಕೃಷಿಕರಿಗಾಗಿ ಕೃಷಿ ಯಾಂತ್ರೀಕರಣವನ್ನು ಜನಪ್ರಿಯಗೊಳಿಸುವುದು.
ತಂತ್ರಜ್ಞಾನ ವರ್ಗಾವಣೆಯಲ್ಲಿ ಸಹಭಾಗಿತ್ವ:
ಉತ್ಪಾದನೆ ಮತ್ತು ಮಾರುಕಟ್ಟೆ sಸರಪಳಿ, ಭಾಗಿದಾರರ ವಿಧಾನಗಳು ಹಲವಾರು ಜನರ ಮಧ್ಯದಲ್ಲಿ ಸಶಕ್ತ ಮತ್ತು ಸಕ್ರಿಯ ಕೊಂಡಿಗಳನ್ನು ಸ್ಥಾಪಿಸುವುದು ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ಹಲವು ಸಂಘಸAಸ್ಥೆಗಳು ಪಾಲ್ಗೊಂಡಿರುತ್ತವೆ. ವಿಶ್ವವಿದ್ಯಾಲಯವು ಸಮಗ್ರ ಕೃಷಿ ಪದ್ಧತಿಯ ಕಾರ್ಯಕ್ರಮವನ್ನು ೨೩ ಜಿಲ್ಲೆಗಳಾದ್ಯಾಂತ ಒಟ್ಟು ೧೦,೦೦೦ ರೈತರಲ್ಲಿ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ.
ತೋಟಗಾರಿಕೆ ಇಲಾಖೆಗಳು, ಕರ್ನಾಟಕ ಸರ್ಕಾರ
ವಿಶ್ವವಿದ್ಯಾಲಯದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು
ವಿವಿಧ ವಲಯಗಳಲ್ಲಿ ಸ್ವಸಹಾಯ ಗುಂಪುಗಳ ನಾಯಕತ್ವ ವಹಿಸಿಕೊಳ್ಳುವುದು
ಪ್ರಗತಿಪರ ರೈತರ ಸಂಘಟನೆಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳು
ಬೆಳೆಯಾಧಾರಿತ ಸಲಹಾ ಸಮಿತಿಗಳು
ಕಂಪನಿಗಳು ಮತ್ತು ಉದ್ಯಮಗಳ ನಾಯಕತ್ವ
ಇತರೇ ಸಿದ್ಧ ಸ್ವಪ್ರೇರಿತ ಗುಂಪುಗಳು ಇತ್ಯಾದಿ
ವಿಸ್ತರಣಾ ನಿರ್ದೇಶನಾಲವು 2009 ರಿಂದ 2021 ಕೈಗೊಂಡ ವಿಸ್ತರಣಾ ಚಟುವಟಿಕೆಗಳು
ವಿಸ್ತರಣಾ ಚಟುವಟಿಕೆಗಳು |
ವಿಸ್ತರಣಾ ಚಟುವಟಿಕೆಗಳ ಸಂಖ್ಯೆಗಳು |
2009-10 |
2010-11 |
2011-12 |
2012-13 |
2013-14 |
2014-15 |
2015-16 |
2016-17 |
2017-18 |
2018-19 |
2019-20 |
2020-21 |
ಒಟ್ಟು |
ತೋಟಗಾರಿಕೆ ಮೇಳ |
- |
- |
1 |
- |
1 |
1 |
1 |
1 |
1 |
1 |
|
1 |
08 |
ಸಮಸ್ಯಾತ್ಮಕ ಕ್ಷೇತ್ರಗಳಿಗೆ ಭೇಟಿ |
10 |
22 |
115 |
160 |
145 |
200 |
120 |
201 |
366 |
599 |
777 |
911 |
3626 |
ತರಬೇತಿ ಕಾರ್ಯಕ್ರಮಗಳು |
20 |
70 |
47 |
71 |
60 |
203 |
163 |
160 |
234 |
267 |
285 |
410 |
1989 |
ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು, ಕ್ಷೇತ್ರ ಪರೀಕ್ಷೆಗಳು & ಮುಂಚೂಣಿ ಪ್ರಾತ್ಯಕ್ಷಿಕೆಗಳು |
4 |
34 |
11 |
85 |
40 |
90 |
99 |
120 |
134 |
259 |
359 |
146 |
1381 |
ಕ್ಷೇತ್ರೋತ್ಸವಗಳು & ರೈತರ ಶೈಕ್ಷಣಿಕ ಪ್ರವಾಸಗಳು |
2 |
11 |
13 |
15 |
10 |
18 |
8 |
63 |
70 |
32 |
50 |
10 |
302 |
ವಸ್ತು ಪ್ರದರ್ಶನಗಳು |
4 |
8 |
7 |
7 |
25 |
33 |
20 |
26 |
32 |
61 |
62 |
37 |
322 |
ಪ್ರಕಟಣೆಗಳು |
1 |
9 |
11 |
9 |
10 |
120 |
67 |
199 |
52 |
190 |
210 |
193 |
1071 |
ರೇಡಿಯೋ ಕಾರ್ಯಕ್ರಮಗಳು |
5 |
8 |
19 |
6 |
14 |
35 |
18 |
63 |
43 |
68 |
25 |
64 |
368 |
ದೂರದರ್ಶನ ಸಂದರ್ಶಗಳು |
4 |
6 |
14 |
13 |
24 |
20 |
26 |
34 |
59 |
91 |
30 |
58 |
379 |
ಜನಪ್ರಿಯ ಲೇಖನಗಳು |
6 |
32 |
48 |
34 |
35 |
65 |
67 |
108 |
216 |
150 |
197 |
96 |
1054 |
ಅರಿವು ಮೂಡಿಸುವ ಕಾರ್ಯಕ್ರಮ |
4 |
10 |
12 |
15 |
16 |
19 |
15 |
17 |
25 |
35 |
65 |
88 |
321 |
ತ್ರೆöÊಮಾಸಿಕ ತೋಟಗಾರಿಕೆ ಕಾರ್ಯಾಗಾರ |
|
|
|
|
|
|
21 |
14 |
30 |
30 |
39 |
4 |
138 |
ಒಂದು ತಿಂಗಳ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ |
|
|
|
|
|
|
15 |
03 |
|
|
|
1 |
19 |
ರೈತರು ವಿಜ್ಞಾನಿಗಳಿಗೆ ನೇರವಾಗಿ ಕರೆಮಾಡಿ ಸಲಹೆ ಪಡೆದಿರುವ ಸಂಖ್ಯೆ |
1215 |
2019 |
2560 |
3011 |
3538 |
4293 |
5146 |
6152 |
8329 |
10100 |
12023 |
4461 |
62847 |
ರೈತರಿಗೆ ಕಿಸಾನ್ ಪೋರ್ಟಲ್ ಮುಖಾಂತರ ಸಲಹಾ ಸಂದೇಶ ಪ್ರಾರಂಭ ವರ್ಷ - 2015 |
|
|
|
|
|
|
95 |
276 |
358 |
500 |
670 |
925676 |
927575 |
ರೈತರಿಗೆ ಉದ್ಯಾನ ಸಹಾಯವಾಣಿ ಮುಖಾಂತರ ಸಲಹೆ ಪ್ರಾರಂಭ ವರ್ಷ - 2016 |
|
|
|
|
|
|
|
6787 |
2795 |
1944 |
2587 |
2446 |
16559 |
ವಿಜ್ಞಾನಿಗಳು ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿರುವುದು |
100 |
211 |
265 |
220 |
317 |
189 |
412 |
392 |
494 |
697 |
662 |
573 |
4532 |
ರೈತರು ತಂತ್ರಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿರುವುದು |
267 |
354 |
1121 |
1635 |
1895 |
1471 |
1329 |
2160 |
2413 |
2655 |
681 |
2340 |
18321 |
ಪ್ರತಿವಾರ ಪರಿಹಾರ ಪ್ರಾರಂಭ ವರ್ಷ - 2017 |
|
|
|
|
|
|
|
|
1110 |
597 |
947 |
1889 |
4543 |
ಕಿಸಾನ್ ಪೋರ್ಟಲ್ ಮುಖಾಂತರ ಸಲಹಾ ಸಂದೇಶ ಪಡೆದ ರೈತರ ಸಂಖ್ಯೆ, ಪ್ರಾರಂಭ - 2016 |
|
|
|
|
|
|
548492 |
671043 |
1038971 |
982629 |
1184948 |
925676 |
5351759 |
ತರಬೇತಿ ಕೇಂದ್ರ:
ವಿಸ್ತರಣಾ ನಿರ್ದೇಶನಾಲಯದ ತಾಂತ್ರಿಕ ಸಿಬ್ಬಂದಿಯು ವಿವಿಯ ವಿಜ್ಞಾನಿಗಳ ಬೆಂಬಲದೊAದಿಗೆ ರೈತರು, ಇಲಾಖೆ ಸಿಬ್ಬಂದಿ, ಉದ್ಯಮಿಗಳು, ವಿತರಕರು ಖಾಸಗೀ ಕಂಪನಿಗಳ ಉದ್ಯೋಗಿಗಳು, ಸ್ವಸಹಾಯ ಗುಂಪುಗಳು, ಸ್ವಶಕ್ತಿ ಗುಂಪುಗಳು ಮುಂತಾದವರಿಗೆ ಒಂದು ದಿನ, ಎರಡು ದಿನಗಳ ಅಥವಾ ಒಂದು ವಾರದ ಅವಧಿಯ ತರಬೇತಿಗಳನ್ನು ಆಯೋಜಿಸಲಾಗುತ್ತದೆ. ತರಬೇತಿ ಕೇಂದ್ರವು ಕ್ಷೇತ್ರಭೇಟಿ, ರೈತರು-ವಿಜ್ಞಾನಿಗಳ ಸಂವಾದಗಳನ್ನು ನೆರವೇರಿಸುತ್ತದೆ. ಅಲ್ಲದೇ ವಿವಿಧ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರ ಮತ್ತು ಇತರೆ ಸಂಘಸAಸ್ಥೆಗಳು ಆಯೋಜಿಸಿದ ಕೃಷಿಮೇಳಗಳಲ್ಲಿ ಭಾಗವಹಿಸಲಾಗುತ್ತದೆ. ರೈತರ ಅಧ್ಯಯನ ಪ್ರವಾಸಗಳು ಸಹ ವಿಸ್ತರಣಾ ನಿರ್ದೇಶನಾಲಯದ ಈ ತರಬೇತಿ ಕೇಂದ್ರದ ಮೂಲಕ ನಡೆಯುತ್ತವೆ.
ತೋಟಗಾರಿಕೆ ಮೇಳ:
‘ತೋಟಗಾರಿಕೆ ಮೇಳ’ವು ಪ್ರತಿವರ್ಷವೂ ಮುಖ್ಯ ಆವರಣದಲ್ಲಿ ವಿಜ್ರಂಬಣೆಯಿAದ ಜರುಗುತ್ತದೆ. ಸಂಶೋಧನ ಕ್ಷೇತ್ರಗಳ ಸುಧಾರಿತ ತಂತ್ರಜ್ಞಾನಗಳನ್ನು ಬಿತ್ತರಿಸುವ ಮತ್ತು ಬೆಳೆ ಉತ್ಪಾದನೆಯ ಅಭಿವೃದ್ಧಿಗಾಗಿ ರೈತರಲ್ಲಿ ಜಾಗೃತಿಯನ್ನು ಮೂಡಿಸಲು ಸಂಶೋಧನಾ ಕೇಂದ್ರಗಳಲ್ಲಿ ಕ್ಷೇತ್ರೋತ್ಸವಗಳು ಸಹ ನಡೆಯುತ್ತವೆ. ತೋಟಗಾರಿಕೆ ಮೇಳವು ಕೃಷಿ ಉಪಕರಣಗಳ ವಸ್ತು ಪ್ರದರ್ಶನವು ಖಾಸಗೀ ಮತ್ತು ಸರ್ಕಾರಿ ಎಜೆನ್ಸಿಗಳಿಂದ ಸುಸಜ್ಜಿತ ಮತ್ತು ಸಾಮಾನ್ಯ ಮಳಿಗೆಗಳಲ್ಲಿ ಪ್ರದರ್ಶಿತಗೊಳ್ಳುತ್ತದೆ. ಅಲ್ಲದೇ ತೋಟಗಾರಿಕೆ ಪ್ರದರ್ಶನ, ಪಶು ಪ್ರದರ್ಶನ, ತ್ವರಿತಗತಿಯಿಂದ ಬೆಳೆದ ತೋಟಗಳು, ಕ್ಷೇತ್ರ ನೇರ ಪ್ರಾತ್ಯಕ್ಷಿಕೆಗಳು, ತಾಂತ್ರಿಕ ಮಾಹಿತಿ ಕೇಂದ್ರ, ಯಂತ್ರಗಳು ಮತ್ತು ಪರಿಕರಗಳ ಪ್ರದರ್ಶನ, ರೈತರಿಂದ ರೈತರ ಸಂವಾದ, ಸಸ್ಯ, ಬೀಜ ಇತ್ಯಾದಿಗಳ ಮಾರಾಟ ಮಳಿಗೆಗಳು ಇತ್ಯಾದಿಗಳನ್ನು ಮೇಳವು ಒಳಗೊಂಡಿರುತ್ತದೆ. ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಸರ್ಕಾರದ ತೋಟಗಾರಿಕೆ, ಕೃಷಿ, ಪಶು ಸಂಗೋಪನೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನ, ಇತರೆ ಅಭಿವೃದ್ಧಿ ಇಲಾಖೆಗಳು, ಸಹಕಾರಿ ಹಾಗೂ ವಿವಿಧ ಹಣಕಾಸು ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಈ ಮೇಳವನ್ನು ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತದೆ.
