ಕ್ರ. ಸಂ. |
ಜರುಗಿಸಿದ ಚಟುವಟಿಕೆಗಳು |
ಅವಧಿ ಮತ್ತು ಸಂಖ್ಯೆ |
ಏಪ್ರಿಲ್ 2008 ರಿಂದ ಮಾರ್ಚ್ 2021 |
1
|
ಗೌರವಾನ್ವಿತ ಕುಲಪತಿ ಡಾ. ಕೆ. ಎಮ್. ಇಂದ್ರೇಶ್ ಮತ್ತು ಅಧಿಕಾರಿಗಳು ಹೊಸತಾದ, ಉತ್ಕೃಷ್ಠವಾದ, ಸಮಸ್ಯಾತ್ಮಕ ಕ್ಷೇತ್ರಗಳಿಗೆ ಭೇಟಿ ನೀಡಿದರು. ಅಲ್ಲದೆ, ಭವಿಷ್ಯತ್ತಿನ ಬೆಳೆಗಳನ್ನು ಶಿಫಾರಸ್ಸು ಮಾಡಿದರು. ಜೊತೆಗೆ ಭೇಟಿ ನೀಡಿದ ಕ್ಷೇತ್ರಗಳಲ್ಲಿ ಲಾಭದಾಯಕ ಬೆಳೆ ಪದ್ಧತಿಗಳನ್ನು ಪ್ರೋತ್ಸಾಹಿಸಿದರು. |
ಪ್ರತಿ ರವಿವಾರ ವಾರದ ಕ್ಷೇತ್ರ ಭೇಟಿ |
2
|
ವಿಜ್ಷಾನಿಗಳ ತಂಡವು ಬೆಳೆ ವಿಕ್ಷಣೆಗಾಗಿ ಸಮಸ್ಯಾತ್ಮಕ ಕ್ಷೇತ್ರ ಭೇಟಿ ನೀಡಲಾಯಿತು. ಅಲ್ಲದೆ, ಋತುಮಾನನುಸಾರ ಬೆಳೆ ಬೆಳೆಯುವ ಕಾಲದಲ್ಲಿ ರೋಗ ನಿರೋಧಕ ಮತ್ತು ನಿರ್ವಹಣೆಗಳ ಸಲಹೆಗಳನ್ನು ನೀಡುವುದು
|
3626
|
3
|
ವಿವಿಧ ಫಲಾನುಭವಿಗಳಿಗೆ ಬೇಡಿಕೆಯಾಧಾರಿತ ಪ್ರಾಯೋಗಿಕ ತರಗತಿಗಳು: ವಿಸ್ತರಣಾ ನಿರ್ದೇಶನಾಲಯವು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ತೋಟಗಾರಿಕೆ ಬೆಳೆ, ಉತ್ಪಾದನೆ, ಸಂರಕ್ಷಣೆ ಮತ್ತು ಮೌಲ್ಯವರ್ಧನೆಗಳ ಕುರಿತು ಬೇಡಿಕೆಯಾಧಾರಿತ ತರಬೇತಿಗಳನ್ನು ಸಂಘಟಿಸುತ್ತದೆ.
|
1989
|
4
|
ಅಗ್ರಿ ಕ್ಲಿನಿಕ್ ಮತ್ತು ಬ್ಯುಸಿನೆಸ್ ಕೇಂದ್ರಗಳು: ತೋವಿವಿಯು ಕೃಷಿ ಉದ್ಯಮದ ಅಭಿವೃದ್ಧಿಗಾಗಿ ನ್ಯೂಡಲ್ ತರಬೇತಿ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವವಿದ್ಯಾಲಯದಿಂದ ಆಯ್ಕೆಯಾದ ನಿರುದ್ಯೋಗಿ ಯುವ ಜನಾಂಗದವರಿಗೆ ೬೦ ದಿನಗಳವರೆಗೆ ತಾಂತ್ರಿಕ ತರಬೇತಿಗಳನ್ನು ನೀಡುವ ಜವಾಬ್ದಾರಿಯನ್ನು ಹೊಂದಿದೆ. ಕೃಷಿ/ ತೋಟಗಾರಿಕೆ ಡಿಪ್ಲೋಮಾ ಪದವೀಧರರು ಅಗ್ರಿಕ್ಲಿನಿಕ್ ಮತ್ತು ಅಕ್ರ ಬ್ಯುಸಿನೆಸ್ ಕೇಂದ್ರಗಳಲ್ಲಿ ಸೇರಿಕೊಳ್ಳಲು ಉತ್ತೇಜಿಸಲಾಗುತ್ತದೆ.
|
ಹೈದ್ರಾಬಾದ್ ಮ್ಯಾನೆಜ್ ಅವರಿಂದ ಪ್ರಾಯೋಜಿತ ಎಸಿಎಬಿಸಿ ತರಬೇತಿ ಕಾರ್ಯಕ್ರಮ ಅಗಸ್ಟ್-ಸೆಪ್ಟಂಬರ್, ೨೦೧೯ ೩೩ ತರಬೇತುದಾರರು |
4a
|
ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ :ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ದೇಶಿ ಡಿಪ್ಲೊಮಾ ಕಾರ್ಯಕ್ರಮವನ್ನು ಜುಲೈ ೨೦೧೯ ರಿಂದ ಪೆಬ್ರುವರಿ ೨೦೨೧ ರ ವರಗೆ ವಿಸ್ತರಣಾ ನಿರ್ದೇಶನಾಲದಲ್ಲಿ, ಮೇ-೨೦೧೯ ರಿಂದ ನವಂಬರ್ ೨೦೨೦ರ ವರೆಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಾಗೂ ಜನವರಿ ೨೦೨೧ ರಿಂದ ಡಿಸೆಂಬರ್ ೨೦೨೧ರ ವರೆಗೆ ತೋಟಗಾರಿಕೆ ಮಹಾವಿದ್ಯಾಲಯನಲ್ಲಿ ಮೈಸೂರಿನಲ್ಲಿ ಆಯೋಜಿಸಲಾಯಿತು. |
03 |
4b |
ರೈತ ಉತ್ಪಾದಕ ಸಂಘಗಳ ಉತ್ತೇಜನ ಕೇಂದ್ರ (FPO): ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆಯವರು ದಿನಾಂಕ: ೨೬ ಪೆಬ್ರುವರಿ, ೨೦೧೯ ರಂದು ರೈತ ಉತ್ಪಾದಕ ಸಂಘಗಳ ಉತ್ತೇಜನ ಕೇಂದ್ರವನ್ನು ನಬಾರ್ಡ್, ಬೆಂಗಳೂರು ಇವರ ಸಹಯೋಗದೊಂದಿಗೆ ಸ್ಥಾಪಿಸಲಾಯಿತು. ಬಾಗಲಕೋಟೆ ಜಿಲ್ಲೆಯಲ್ಲಿ Promoting Organization development Fund – Interest Differential (PODF - ID) ರ ಅಡಿಯಲ್ಲಿ ೬ ರೈತ ಉತ್ಪಾದಕ ಸಂಘಗಳನ್ನು ಸ್ಥಾಪಿಸಲಾಯಿತು ಈ ಕಾರ್ಯಕ್ರಮದಡಿಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ೧೪ ತರಬೇತಿಗಳನ್ನು ಹಾಗೂ ೧೮ ರೈತರಿಗೆ ಬೆಳೆವಾರು ಮಾರಾಟ ಮಾಹಿತಿ ಹಾಗೂ ಮಾರಾಟಗಾರರ ಜೊತೆಗೆ ಸಂರ್ಪಕವನ್ನು ಕಲ್ಪಿಸಲಾಯಿತು
1. ಶ್ರೀ ಬಸವ ಸಂಜೀವಿನಿ ರೈತರ ಉತ್ಪಾದಕ ಕಂಪನಿ ಲಿಮಿಟೆಡ್, ತುಂಗಳ ತಾ||ಜಮಖಂಡಿ 2. ಬಾಗಲಕೋಟ ಬೆಳೆಗಾರರ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್, ಬಾಗಲಕೋಟೆ 3. ಜೈ ಬಲ ಭೀಮ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್, ಮುತ್ತಲದಿನ್ನಿ ಆರ್.ಸಿ. ತಾ|| ಬೀಳಗಿ 4. ಕೃಷಿ ಕೀರಣ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್, ಸುನಗ ತಾ|| ಬೀಳಗಿ 5. ರಾಷ್ಟೊçÃತ್ತಾನ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್, ಢವಳೇಶ್ವರ ತಾ|| ರಬಕವಿ-ಬನಹಟ್ಟಿ 6. ಗವಿಶ್ರೀ ರೈತರ ಉತ್ಪಾದಕರ ಕಂಪನಿ ಲಿಮಿಟೆಡ್, ಇಲಕಲ್ ತಾ|| ಹುನಗುಂದ
|
06 |
4c |
ಹಾರ್ಟಿವಾರ್ ರೂಮ್: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇನಾಲಯವು ತನ್ನ ಕಾರ್ಯವ್ಯಾಪ್ತಿಯಲ್ಲಿ ಬರುವ ೧೨ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕಗಳಲ್ಲಿ ಹಾಗೂ ಒಂದು ಕೃಷಿ ವಿಜ್ಞಾನ ಕೇಂದ್ರದಲ್ಲಿ ‘ಹಾರ್ಟಿವಾರ್ ರೂಮ್’ ಗುಂಪುಗಳನ್ನು ರಚಿಸಿ, ವಾಟ್ಸಪ್ ಗುಂಪುಗಳ ಮುಂಖಾAತರ ಬೆಳೆವಾರು ರೈತರಿಗೆ ಸಲಹೆ ಹಾಗೂ ಸೂಕ್ತ ಮಾರ್ಗದರ್ಶನಗಳನ್ನು ನೀಡಿರುತ್ತದೆ, ಅಲ್ಲದೆ ತೋಟಗಾರಿಕೆ ಬೆಳೆಗಳ ಮಾರುಕಟ್ಟೆ, ಸಂಸ್ಕರಣೆ, ಮೌಲ್ಯವರ್ಧನೆಯ ಬಗ್ಗೆಯೂ ರೈತರಿಗೆ ಸಾಕಷ್ಟು ಮಾಹಿತಿಗಳನ್ನು ವಿಜ್ಞಾನಿಗಳ ಮೂಲಕ ತಿಳಿಸಲಾಗಿದೆ. ಇದಕ್ಕಾಗಿ ರೈತ ಉತ್ಪಾದಕರ ಸಂಘಗಳ ಸಹಾಯ ಪಡೆಯಲಾಗಿದೆ.
|
ತೋ.ವಿ.ಶಿ.ಘಟಕಗಳು ಮತ್ತು ಕೆ.ವಿ.ಕೆ., ಅಡಿಯಲ್ಲಿ ೧೩ ಗುಂಪುಗಳು |
5
|
ತಂತ್ರಜ್ಞಾನ ಪ್ರಾತ್ಯಕ್ಷಿಕೆಗಳು ಮತ್ತು ನೇರ ಪ್ರಾತ್ಯಕ್ಷಿಕೆಗನ್ನೊಳಗೊಂಡ ಕ್ಷೇತ್ರ ಪ್ರಯೋಗಗಳು - ಪದ್ಧತಿ ಪ್ರಾತ್ಯಕ್ಷಿಕೆಗಳು, ವಿವಿಧ ಸ್ಥಳಗಳ ಪ್ರಯೋಜನಗಳು ಮತ್ತು ಫಲಿತಾಂಶ ಪ್ರಾತ್ಯಕ್ಷಿಕೆಗಳು ತಂತ್ರಜ್ಞಾನದ ಪರಿಶೀಲನೆಗೆಂದು ರೈತರ ಹೊಲಗಳನ್ನು ಬಳಸಿಕೊಳ್ಳಲಾಗುತ್ತದೆ. ಕೃಷಿ ವಿಜ್ಞಾನ ಕೇಂದ್ರವು ಸಂಶೋಧನಕಾರರಿಗೆ ಆಯ್ಕೆ ಮಾಡಿಕೊಟ್ಟ ರೈತರ ಹೊಲಗಳಲ್ಲಿ ಸಂಘಟಿಸುತ್ತದೆ ಪದ್ಧತಿ ಪ್ರಾತ್ಯಕ್ಷಿಕೆಗಳು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಕ್ಷೇತ್ರ ಪ್ರಯೋಗ, ನೇರ ಪ್ರಾತ್ಯಕ್ಷಿಕೆಗಳು ವಿಸ್ತರಣಾ ವಿಜ್ಞಾನಿಗಳಿಂದ ಸಂಘಟಿಸಲ್ಪಡುತ್ತವೆ.
|
1458
|
6
|
ಕ್ಷೇತ್ರೋತ್ಸವಗಳು ಮತ್ತು ರೈತರ ಪ್ರವಾಸಗಳು: ಪ್ರಸ್ತುತ ಪಡಿಸಿದ ಹೊಲಗಳಲ್ಲಿ ಬೆಳೆಯು ಸರಿಯಾದ ಹಂತದಲ್ಲಿದ್ದಾಗ ಕೃಷಿ ತತ್ವಗಳನ್ನು ತೋರಿಸಲು ವಿಶೇಷವಾದ ಮತ್ತು ಜನಪ್ರಿಯ ನವೀನ ತಂತ್ರಜ್ಞಾನಗಳನ್ನು ಸಂಘಟಿಸುವುದು. ಇನ್ನೊಂದು ವಿಸ್ತರಣಾ ಚಟುವಟಿಕೆಯೆಂದರೆ ಕೃಷಿ ಪದ್ಧತಿಗಳಾಧಾರಿತ ಕೃಷಿ/ ತೋಟಗಾರಕಾ ಅತ್ಯುತ್ತಮ ಅಧ್ಯಯನ ಪ್ರವಾಸಗಳನ್ನು ರೈತರಿಗಾಗಿ ಏರ್ಪಡಿಸುವುದು.
|
330
|
7
|
ವಸ್ತು ಪ್ರದರ್ಶನಗಳು: ತೋವಿವಿಯು ತೋಟಗಾರಿಕೆಯ ಮತ್ತು ತೋವಿವಿಯಿಂದ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ವಸ್ತು ಪ್ರದರ್ಶನವನ್ನು ಸಂಘಟಿಸುತ್ತದೆ. ಅಲ್ಲದೆ, ಭಾ.ಅ.ಕೃ.ಪ. ನಿಂದ ಗೋವಾದಲ್ಲಿ ಆಯೋಜಿತಗೊಂಡ ಕೊಂಕಣ ಶಿವಮೊಗ್ಗ ಮತ್ತು ನವದೆಹಲಿಯ ಪುಸಾ ಕೃಷಿ ಮೇಳಗಳಲ್ಲಿ ತೋವಿವಿಯು ಭಾಗವಹಿಸುತ್ತದೆ. ಇಂತಹ ಬೃಹತ್ ಮೇಳಗಳಲ್ಲಿ ತೋವಿವಿಯ ತೋಟಗಾರಿಕೆ ತಂತ್ರಜ್ಞಾನಗಳ ಪ್ರಕಟಣೆಗಳು ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತವೆ.
|
322
|
8
|
ತೋಟಗಾರಿಕೆ ಮೇಳ: ಮೇಳದಲ್ಲಿ ಸುಸ್ಥಿರ ಕೃಷಿಯ ಪ್ರಾತ್ಯಕ್ಷಿಕೆಗಳು ಪ್ರದರ್ಶಿತಗೊಂಡಿರುತ್ತವೆ. ಮೇಳದ ಮೂರು ದಿನಗಳಲ್ಲಿ ರೈತರು ಹಲವಾರು ಸಂವಾದಗಳಲ್ಲಿ ಪಾಲ್ಗೊಳ್ಳುತ್ತಾರೆ. ಮಾಹಿತ ಕೇಂದ್ರವು ಹಲವಾರು ರೈತರ ಕೃಷಿ ಸಮಸ್ಯೆಗಳನ್ನು ಬಗೆ ಹರಿಸುವ ಕೇಂದ್ರವಾಗಿರುತ್ತದೆ. ಶ್ರೇಷ್ಠ ತೋಟಗಾರಿಕೆ ಪ್ರಶಸ್ತಿಯನ್ನು ಪ್ರತಿ ಜಿಲ್ಲೆಯಿಂದ ಆಯ್ಕೆಯಾದ ರೈತರಿಗೆಪ್ರತಿ ವರ್ಷವೂ ಕೊಡಮಾಡುತ್ತಲಿದೆ. ಇದು ೫೦೦೦/- ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ.
|
08
|
9
|
ಪ್ರಕಟಣೆಗಳು: ತೋವಿವಿಯು ಇಂಗ್ಲೀಷಿನಲ್ಲಿ ದ್ವೀಮಾಸಿಕ ವಾರ್ತಾಪತ್ರ; ಕನ್ನಡದಲ್ಲಿ ಉದ್ಯಾನಲೋಕ ತ್ರೆöÊಮಾಸಿಕ ಪತ್ರಕೆಯನ್ನು ಪ್ರಕಟಿಸುತ್ತಲಿದೆ. ಅಲ್ಲದೆ, ಪ್ರತಿ ವರ್ಷದ ತೋವಿವಿಯ ವಾರ್ಷಿಕ ವರದಿಯನ್ನು ಸಹ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಪ್ರಕಟಿಸುತ್ತಾ ಬಂದಿದೆ. ಇವುಗಳ ಜೊತೆಗೆ ವಿಜ್ಞಾನಿಗಳು ಬರೆದ ತಾಂತ್ರಿಕ ಹಸ್ತಪ್ರತಿಗಳನ್ನು ಮತ್ತು ತೋಟಗಾರಿಕೆ ಬೆಳೆಗಳ ಸಮಗ್ರ ಕೈಪಿಡಿ, ಸಂರಕ್ಷಿತ ಕೃಷಿ, ತರಕಾರಿ ಬೆಳೆಗಳು ಮತ್ತು ಹಲವು ಬಗೆಯ ತಾಂತ್ರಿಕ ಕೈಪಿಡಿಗಳನ್ನು ಸಹ ಪ್ರಕಟಿಸುತ್ತಲಿದೆ.
|
1081
|
10
|
ಆಕಾಶವಾಣಿ: ವಿಜ್ಞಾನಿಗಳಿಂದ ವಿದ್ಯುನ್ಮಾನ ಮಾಧ್ಯಮದ ರೇಡಿಯೋ ಕಾರ್ಯಕ್ರಮಗಳನ್ನು ರೈತರಿಗೆ ಮಾಹಿತಿಗಳನ್ನು ತಲುಪಿಸಲಾಗುತ್ತದೆ. ಆಕಾಶವಾಣಿ ಮಾತುಗಳು ಮತ್ತು ನೇರ ಫೋನ್ ಕಾರ್ಯಕ್ರಮಗಳಲ್ಲಿ ಸಂದರ್ಶನಗಳನ್ನು ನೀಡುವುದರ ಮೂಲಕ ಕೃಷಿಯಲ್ಲಿಯ ಪ್ರಸ್ತುತ ಸಮಸ್ಯೆಗಳನ್ನು ಗ್ರಾಮೀಣ ಸಮುದಾಯಗಳಿಗೆ ತಲುಪಿಸುವುದು. ಅವು ಆಲ್ ಇಂಡಿಯಾ ರೇಡಿಯೋ ಬೆಂಗಳೂರು/ ಧಾರವಾಡ/ ವಿಜಯಪುರ/ ಚಿತ್ರದುರ್ಗ/ ಕಲ್ಬುರ್ಗಿ ಇತ್ಯಾದಿ.
|
368
|
11
|
ದೂರದರ್ಶನ ಸಂದರ್ಶನಗಳು: ಮಾದ್ಯಮ ಸಹಕಾರದ ಮೇಲೆ (ರಾಜ್ಯ ಮಟ್ಟದ) ಸಮಿತಿಯ ಸಂಘಟಿಸಿದ ವಿಚಾರ ಸಂಕಿರಣದಲ್ಲಿ ಎಲ್ಲ ವಿಶ್ವವಿದ್ಯಲಯಗಳು ಭಾಗವಹಿಸಿದ್ದವು. ಅಭಿವೃದ್ಧಿಪರ ಇಲಾಖೆಗಳ ಈ ಸಮಯದಲ್ಲಿನ ವಿಷಯಗಳು ಮತ್ತು ಅಂತಿಮಗೊಳಿಸಿದರು. ಆಯಾ ವಿಷಯಗಳಿಗೆ ಸಂಬAಧಿಸಿದ ವಿಜ್ಞಾನಿಗಳನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಮಾತಾಡಲು ಮತ್ತು ದೂರದರ್ಶನಲ್ಲಿ ಸಂದರ್ಶನ ಕೊಡಲು ಕಳಿಸುವುದು
|
379
|
12
|
ಸಮಗ್ರ ಕೃಷಿ ಪದ್ಧತಿ ಯೋಜನೆ: ಈ ಯೋಜನೆಯು ಒಟ್ಟು ೧೩ ಕೋಟಿ ರೂಪಾಯಿಗಳಷ್ಟು ಅನುದಾನವನ್ನು ೨೫,೦೦೦ ಹೆಕ್ಟೇರ್ ಪ್ರದೇಶಗಳಷ್ಟು ಒಳಗೊಂಡಿದೆ. ಹಂತ-೧ ಮತ್ತು ಹಂತ-೨ ಗಳಲ್ಲಿ ಫಲಾನುಭವಿಗಳಿಗೆ ಬೀಜಗಳು, ಸಸ್ಯಗಳು, ನಾಟಿ ಪರಿಕರಗಳು, ಸಣ್ಣ ಭೂ ಹಿಡುವಳಿದಾರರು ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡ ಹೊಸ ತಳಿಗಳನ್ನು ಪಡೆದಿದ್ದಾರೆ.
|
31 ಘಟಕಗಳು
ಯೋಜನೆ ಮುಕ್ತಾಯಗೊಂಡಿದೆ.
|
13
|
ನೈಸರ್ಗಿಕ ವಿಪತ್ತುಗಳಿಗೆ ವಿಸ್ತರಣಾ ಬೆಂಬಲ: ಪ್ರವಾಹ ಪೀಡಿತದಂತ ನೈಸರ್ಗಿಕ ವಿಕೋಪಗಳಿಂದಾಗಿ ತೋವಿವಿಯ ವಿಜ್ಞಾನಿಗಳು ವಿಕೋಪಗೊಂಡ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಮತ್ತೆ ಕೃಷಿಯನ್ನು ಕಡೆಗೆ ಉತ್ತೇಜಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ.
|
07
|
14
|
ಜನಪ್ರಿಯ ಲೇಖನಗಳು ಮತ್ತು ಇತರೇ ವಿಸ್ತರಣಾ ಸೇವೆಗಳು: ವಿಶ್ವವಿದ್ಯಾಲಯದ ಎಲ್ಲ ಪ್ರಕಟಣೆಗಳು ನಮ್ಮ ವಿಶ್ವವಿದ್ಯಾಲಯ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತವೆ. ಹಸ್ತಪ್ರತಿಗಳು, ತಾಂತ್ರಿಕ ಕೈಪಿಡಿಗಳು ಸಹ ರೈತ ಸಮುದಾಯದ ಪ್ರಯೋಜನಕ್ಕಾಗಿ ಪ್ರಕಟಣೆಗೊಳ್ಳುತ್ತವೆ. |
1151
|
15
|
ಉದ್ಯಾನ ಸಹಾಯವಾಣಿ: ನವೀನ ಕೃಷಿ ತಾಂತ್ರಿಕೆಗಳನ್ನು ರೈತಾಪಿ ಜನರಿಗೆ ತಲುಪಿಸಲು ಉದ್ಯಾನಸಹಾಯವಾಣಿಯು ೩ನೇ ಸೆಪ್ಟಂಬರ್-೨೦೧೬ ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು ಉದ್ಘಾಟಿಸಿದರು, ಉದ್ಯಾನ ಸಹಾಯವಾಣಿ ಸಂಖ್ಯೆ: ೧೮೦೦ ೪೨೫ ೭೯೧೦.
|
ದಿನಾಂಕ: 31.03.2021 ವರೆಗೆ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಬಂದಿರುವ ಒಟ್ಟು ಕರೆಗಳ ಸಂಖ್ಯೆ 16559
|
16
|
ತೋಟಗಾರಿಕಾ ಸಹಾಯಕ ಅಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರುಗಳಿಗೆ ತರಬೇತಿ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ೨೦೧೬-೧೭ನೇ ಸಾಲಿನಿಂದ ಆಯ್ಕೆಗೊಂಡ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಬಾಗಲಕೋಟೆಯ ವಿಸ್ತರಣಾ ನಿರ್ದೇಶನಾಲಯದಲ್ಲಿ ಒಂದು ತಿಂಗಳಿನ ತರಬೇತಿಗಳನ್ನು ನೀಡಲಾಗುತ್ತದೆ.
|
ಒಟ್ಟು ೩೧೨ ಅಧಿಕಾರಿಗಳಿಗೆ ೩ ತಂಡಗಳನ್ನಾಗಿ ಮಾಡಿ ತರಬೇತಿಯನ್ನು ನೀಡಲಾಯಿತು
|
17
|
ಪ್ರತಿ ವಾರ ಪರಿಹಾರ: ತೋ.ವಿ.ವಿಯು ಪ್ರತಿವಾರ ಪರಿಹಾರ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಪ್ರತಿ ಸೋಮವಾರದಂದು ರೈತರು ಇದರ ಪ್ರಯೋಜನವನ್ನು ೨೦೧೬-೧೭ ನೇ ಸಾಲಿನಿಂದ ಪಡೆದುಕೊಂಡಿದ್ದಾರೆ. ಪ್ರತಿ ಸೋಮವಾರ ತಜ್ಞರು ಕಚೇರಿಯಲ್ಲಿಯೇ ಲಭ್ಯವಿದ್ದು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಈ ಕಾರ್ಯಕ್ರಮದಿಂದ ರೈತರು ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆದಿದ್ದಾರೆ.
|
ಪ್ರತಿ ಸೋಮವಾರದಂದು ೧೨ ತೋ.ವಿ.ಶಿ.ಘಟಕಗಳು ಮತ್ತು ಕೃ.ವಿ.ಕೇಂದ್ರಗಳಲ್ಲಿ - 118
|
18
|
ಉನ್ನತ ಕೃಷಿ ಅಭಿಯಾನ ಕಾರ್ಯಕ್ರಮ: ಭಾ.ಕೃ.ಅ.ಪ. ನವದೆಹಲಿಯ ಸಹಯೋಗದೊಂದಿಗೆ ಬಾಗಲಕೋಟೆ ತೋವಿವಿಯ ವಿಸ್ತರಣಾ ನಿರ್ದೇಶನಾಲಯದಲ್ಲಿ ಉನ್ನತ ಭಾರತ ಆಭಿಯಾನದಡಿಯಲ್ಲಿ ತೋಟಗಾರಿಕೆಯಲ್ಲಿ ಯುವ ರೈತರಿಗೆ ಸುಧಾರಿತ ಕೌಶಲ್ಯಾಭಿವೃದ್ಧಿ ಕುರಿತು ೫ ತರಬೇತಿಗಳನ್ನು ನಡೆಸಲಾಗಿದೆ.
|
ಬಾಗಲಕೋಟೆ, ಅರಭಾವಿ, ವಿಜಯಪುರ, ದೇವಿಹೊಸೂರ ಮತ್ತು ಯಾದಗಿರಿ ಈ ಐದು ಜಿಲ್ಲೆಗಳ ೧೪೪ ಯುವಜನರು ಪ್ರಯೋಜನ ಪಡೆದುಕೊಂಡಿದ್ದಾರೆ.
|
19
|
ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಕಾಯಿದೆ ಹಕ್ಕುಗಳ ಜಾಗೃತಿ ಕಾರ್ಯಕ್ರಮ: ಒಂದು ದಿನದ ೫ ತರಬೇತಿಗಳನ್ನು ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಕಾಯಿದೆ ಹಕ್ಕುಗಳ ಮೇಲೆ ನಡೆಸಲಾಯಿತು. |
ಈ ಕಾರ್ಯಕ್ರಮದಲ್ಲಿ ಬಾಗಲಕೋಟೆ ತೋವಿವಿ ವ್ಯಾಪ್ತಿಯಲ್ಲಿ ಬರುವ ೭೩೫ ಜನ ತೋಟಗಾರಿಕೆ ರೈತರು ಪಾಲ್ಗೊಂಡಿದ್ದರು.
|
20
|
ಪ್ರಧಾನಮಂತ್ರಿ ಫಸಲಭೀಮಾ ಯೋಜನಾ ಜಾಗೃತಿ ಕಾರ್ಯಕ್ರಮ: ಕೋಲಾರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಪ್ರದಾನಮಂತ್ರಿ ಫಸಲ ಭೀಮಾ ಯೋಜನಾ ಜಾಗೃತಿ ಕಾರ್ಯಕ್ರಮ ನೆರವೇರಿತು.
|
೪೫೦ ಕ್ಕಿಂತ ಹೆಚ್ಚು ರೈತರು ಮತ್ತು ರೈತ ಮಹಿಳೆಯರು ಈ ಕಾರ್ಯಕ್ರಮದ ಪ್ರಯೋಜನೆಯನ್ನು ಪಡೆದುಕೊಂಡಿರುತ್ತಾರೆ.
|
21
|
ಮೇರಾ ಗಾಂವ್ ಮತ್ತು ಮೇರಾ ಗೌರವ್: ರೈತರು ಗ್ರಾಮಗಳನ್ನು ದತ್ತು ತೆಗೆದುಕೊಳ್ಳುವುದರ ಮೂಲಕ ವಿಜ್ಞಾನಿಗಳ ಅಂತಃಸತ್ವವನ್ನು ಹೆಚ್ಚಿಸುವುದು ಮತ್ತು ವಿಜ್ಞಾನಿಗಳ ನೇತೃತ್ವದಲ್ಲಿ ಅವುಗಳ ಕಾರ್ಯಕ್ರಮಗಳನ್ನು ಸಂಘಟಿಸಿ ಜಾಗೃತಿ ಮೂಡಿಸುವುದು.
|
ಒಟ್ಟು ೭ ಜಿಲ್ಲೆಗಳ ತೋವಿವಿಯ ವ್ಯಾಪ್ತಿಯಲ್ಲಿ ಬರುವ ೧೩ ಕೆಲಸ ಮಾಡುವ ಘಟಕಗಳಲ್ಲಿ ೬೫ ಗ್ರಾಮಗಳನ್ನು ದತ್ತು ತೆಗೆದುಕೊಂಡು ಈ ಯೋಜನೆಯನ್ನು ಕಾರ್ಯಗತ ಮಾಡಿಕೊಂಡಿದೆ. |
22
|
ಸಸ್ಯಸಂತೆ: ಬೀಜ ಮತ್ತು ಸಸ್ಯಗಳನ್ನು ಮಾರಾಟ ಮಾಡುವ ಸಸ್ಯಸಂತೆಯು ಪ್ರತಿ ವರ್ಷ ಜೂನ್‌ದಲ್ಲಿ ನಡೆಸಲಾಗುತ್ತದೆ.
|
ಬೀಜ ರಹಿತ ಪೇರು, ಮಾವು, ದಾಳಿಂಬೆ ಮತ್ತು ನುಗ್ಗೆ, ಮೆಣಸಿನಕಾಯಿ, ಈರುಳ್ಳಿ, ಸೆಣಬು ಮತ್ತು ಸೊಯಾಬೀನ್ ಬೀಜಗಳು ಸಸ್ಯಸಂತೆಯಲ್ಲಿ ಮಾರಾಟವಾದವು
|
23
|
ಬೀಜಗ್ರಾಮ ಕಾರ್ಯಕ್ರಮ: ೧೪೪ ಎಕರೆಯ ರೈತರ ಜಮೀನುಗಳನ್ನು ಉತ್ತಮ ಗುಣಮಟ್ಟದ ಬೀಜಗಳಿಗಾಗಿ ತೆಗೆದುಕೊಂಡು ಈರುಳ್ಳಿ, ಮೆಣಸಿನಕಾಯಿ ಮತ್ತು ನುಗ್ಗೆ ಬೀಜೋತ್ಪಾದನೆಯನ್ನು ನಡೆಸಲಾಗುತ್ತದೆ.
|
೧೮೪.೭೫ ಕ್ವಿಂಟಾಲ್ ಅರ್ಕಾ ಕಲ್ಯಾಣ ಮತ್ತು ೧೦ ಕ್ವಿಂಟಾಲ್ ಭೀಮಾ ರೆಡ್ ಉಳ್ಳಾಗಡ್ಡಿ ಬೀಜಗಳು ೩೦ ಕವಿಂಟಾಲ್ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಮತ್ತು ೨೦ ಕ್ವಿಂಟಾಲ್ ಭಾಗ್ಯ ನುಗ್ಗೆ ಬೀಜಗಳು ಉತ್ಪಾದನೆಯಾದವು
|