ಅಭಿಪ್ರಾಯ / ಸಲಹೆಗಳು

ಡೀನ್‌ ಸ್ನಾತಕೋತ್ತರವರ ಸಂದೇಶ

ಡಾ. ರವಿಂದ್ರ ಮುಲಗೆ, Ph.D. [ತೋಟಗಾರಿಕೆ], ತರಕಾರಿ ವಿಜ್ಞಾನ

ಡೀನ್‌, ಸ್ನಾತಕೋತ್ತರ ಅಧ್ಯಯನ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ, ಕರ್ನಾಟಕ, ಭಾರತ

ಜಂಗಮ ದೂರವಾಣಿ ಸಂಖ್ಯೆ: 08351-230301, ಚರ ದೂರವಾಣಿ ಸಂಖ್ಯೆ: 9480696380, ಮಿಂಚಂಚೆ ವಿಳಾಸ: deanpgs@uhsbagalkot.edu.in

ಸಂದೇಶ

     ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಘಟಕವು  ಸ್ನಾತಕೋತ್ತರ ಮತ್ತು ಡಾಕ್ಟರಲ್‌ ಪದವಿ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಸ್ನಾತಕೋತ್ತರ ಪಠ್ಯಕ್ರಮದ ಪರಿಷ್ಕರಣೆ, ಅಭಿವೃದ್ಧಿ, ಮೌಲ್ಯಮಾಪನ ಹಾಗೂ ಸುಧಾರಣೆ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ವಿನ್ಯಾಸಗೊಳಿಸಲಾದ ತೋಟಗಾರಿಕೆ ಮತ್ತು ಸಂಬಂಧಿತ ವಿಷಯಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಸ್ನಾತಕೋತ್ತರ ಅಧ್ಯಯನಗಳ ನಿರ್ದೇಶನಾಲಯವನ್ನು ಸನ್‌ 2010ರಲ್ಲಿ ಸ್ಥಾಪಿಸಲಾಯಿತು. ವಿಶ್ವವಿದ್ಯಾಲಯವು ಈ ಕೆಳಗಿನ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿದ್ದು, ಅವುಗಳೆಂದರೆ, M.Sc. [Hort]/ Ph.D [Hort.] 1) ತರಕಾರಿ ವಿಜ್ಞಾನ 2) ಹಣ್ಣು ವಿಜ್ಞಾನ 3) ಪುಷ್ಪ ಕೃಷಿ ಮತ್ತು ಭೂ ದೃಶ್ಯ ವಿನ್ಯಾಸ 4) ತೋಟಪಟ್ಟಿ, ಸಾಂಬಾರು, ಔಷಧೀಯ ಮತ್ತು ಸುಗಂಧಿತ ಬೆಳೆಗಳು ಮತ್ತು 5) ಕೊಯ್ಲೋತ್ತರ ತಂತ್ರಜ್ಞಾನ ನಿರ್ವಹಣೆ.   ಅಲ್ಲದೇ,  M.Sc. [Hort] in 6) ಕೀಟಶಾಸ್ತ್ರ 7) ಸಸ್ಯರೋಗಶಾಸ್ತ್ರ 8) ಅನುವಂಶಿಕ ಮತ್ತು ಸಸ್ಯತಳಿ ಶಾಸ್ತ್ರ 9) ಸಸ್ಯ ಜೈವಿಕ ತಂತ್ರಜ್ಞಾನ ಮತ್ತು 10) ಮಣ್ಣು ವಿಜ್ಞಾನ ಮತ್ತು Ph. D in 1) ಕೀಟಶಾಸ್ತ್ರ 2) ಸಸ್ಯರೋಗಶಾಸ್ತ್ರ 3) ಅನುವಂಶಿಕ ಮತ್ತು ಸಸ್ಯತಳಿ ಶಾಸ್ತ್ರ ಹಾಗೂ 4) ಸಸ್ಯ ಜೈವಿಕ ತಂತ್ರಜ್ಞಾನ.  ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಕನಿಷ್ಠ ಅವಧಿಯು ಎರಡು ಶೈಕ್ಷಣಿಕ ವರ್ಷಗಳು ಅಥವಾ 4 ಸೆಮಿಸ್ಟರ್‌ಗಳು ಮತ್ತು ಡಾಕ್ಟರಲ್‌ ಪದವಿ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಕನಿಷ್ಠ ಮೂರು ಶೈಕ್ಷಣಿಕ ವರ್ಷಗಳು ಅಥವಾ 06 ಸೆಮಿಸ್ಟರ್‌ಗಳಾಗಿರುತ್ತವೆ.  

       ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯು ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಪಾಲುದಾರರಾಗಿದ್ದು ಇವು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಅವರ ಭವಿಷ್ಯದ ವೃತ್ತಿ ಜೀವನವನ್ನು ರೂಪಿಸಲು ಸಹಾಯ ಮಾಡುತ್ತಿವೆ. ಈ ಗೌರವಾನ್ವಿತ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಸ್ನಾತಕೋತ್ತರ ವಿದ್ಯಾರ್ಥಿಗಳು ತಮ್ಮ ಪರಿಣಿತಿಯನ್ನು ರೈತರ ಜೀವನ ಮಟ್ಟವನ್ನು ಸುಧಾರಿಸಲು ಮತ್ತು ತೋಟಗಾರಿಕೆ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಗೆ ಬಳಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೃಷಿ ಮತ್ತು ಗ್ರಾಮೀಣ ಸಮುದಾಯಕ್ಕೆ ತೋಟಗಾರಿಕಾ ಬೆಳವಣಿಗೆ ಮತ್ತು ಜೀವನೋಪಾಯದ ಬೆಂಬಲವನ್ನು ಹೆಚ್ಚಿಸಲು ವಿದ್ಯಾರ್ಥಿಗಳು ಅಂತಿಮವಾಗಿ ದಾರಿದೀಪವಾಗುತ್ತಾರೆ ಎಂದು ನಿರೀಕ್ಷಿಸಲಾಗಿದೆ.  ಎಲ್ಲಾ ಸ್ನಾತಕೋತ್ತರ ಮತ್ತು ಡಾಕ್ಟರಲ್‌ ಪದವಿಯ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಹೆಮ್ಮೆಯಿಂದ ಉದಾತ್ತ ವೃತ್ತಿ ಸೇವೆ ಸಲ್ಲಿಸುವ ಅವರ ಮುಂದಿನ ಪ್ರಯತ್ನಗಳಲ್ಲಿ ಉತ್ತಮ ಯಶಸ್ಸನ್ನು ಕಾಣಲಿ ಎಂದು ನಾನು ಹೃದಯಾಂತರಾಳದಿಂದ ಹಾರೈಸುತ್ತೇನೆ.  

 

 

ಇತ್ತೀಚಿನ ನವೀಕರಣ​ : 21-03-2024 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080