ಅಭಿಪ್ರಾಯ / ಸಲಹೆಗಳು

ಗ್ರಂಥಾಲಯ

ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿರುವ ಮುಖ್ಯ ಗ್ರಂಥಾಲಯ ಮತ್ತು ಮಹಾವಿದ್ಯಾಲಯಗಳ ಗ್ರಂಥಾಲಯಗಳು ಶೈಕ್ಷಣಿಕ, ಸಂಶೋಧನೆ ಮತ್ತು ವಿಸ್ತರಣೆ ಉದ್ದೇಶವನ್ನು ಬಲಪಡಿಸುವಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಗ್ರಂಥಾಲಯದ ವ್ಯವಸ್ಥೆಯ ಪ್ರಮುಖ ಗುರಿ ವಿದ್ಯಾರ್ಥಿಗಳು, ವಿಜ್ಞಾನಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ವಾಚನ ಜ್ಞಾನ ತಲುಪಿಸುವದು. ಪುಸ್ತಕ, ನಿಯತಕಾಲಿಕೆಗಳು, ಪ್ರೌಢ ಪ್ರಬಂಧಗಳು, ವರದಿಗಳು, ನಕ್ಷೆಗಳು ಮತ್ತು ವಿಶ್ವಕೋಶಗಳನ್ನು ಮುಖ್ಯ ಆವರಣದ ಗ್ರಂಥಾಲಯ ಮತ್ತು ಎಲ್ಲ ಮಹಾವಿದ್ಯಾಲಯಗಳ ಆವರಣದಲ್ಲಿರುವ ಗ್ರಂಥಾಲಯಗಳಲ್ಲಿ ಸಂಗ್ರಹಿಸಲಾಗಿದೆ. ಮುದ್ರಿತ ಸಂಪನ್ಮೂಲಗಳಲ್ಲದೆ ಗ್ರಂಥಾಲಯಗಳು ಇ-ಪುಸ್ತಕಗಳು, ಇ-ನಿಯತಕಾಲಿಕೆಗಳು ಹಾಗೂ ದತ್ತಾಂಶ ಸಂಗ್ರಹದ ಅತ್ಯಮೂಲ್ಯವಾದ ಭಂಡಾರವನ್ನು ಹೊಂದಿವೆ.
ವಿಶ್ವವಿದ್ಯಾಲಯದ ಮುಖ್ಯ ಗ್ರಂಥಾಲಯವು uhs.Remotlog.com Proxy remote access server ಹೊಂದಿದ್ದು, ಡಿಜಿಟಲ್ ಗ್ರಂಥಾಲಯದ ಸೇವೆಗಳನ್ನು ತೋಟಗಾರಿಕೆ ಸಂಶೋಧನಾ ಹಾಗೂ ವಿಸ್ತಾರಣಾ ಕೇಂದ್ರಗಳಿಗೆ ಮತ್ತು ಎಲ್ಲ ಆವರಣದ ಗ್ರಂಥಾಲಯಗಳಿಗೆ ಮಾಹಿತಿಯನ್ನು ಒದಗಿಸುತ್ತದೆ.
 
ಉಲ್ಲೇಖ ಪುಸ್ತಕಗಳ ವಿಭಾಗ (Reference Section):
              ವಿಶ್ವವಿದ್ಯಾಲದಲ್ಲಿನ ಪ್ರತಿ ಗ್ರಂಥಾಲಯವು ನಿರ್ದಿಷ್ಟ ತ್ವರಿತ ಹಾಗೂ ಸಿದ್ಧ ಮಾಹಿತಿಗೆ ಮೀಸಲಾದ ಉತ್ತಮ ಪುಸ್ತಕಗಳ ಸಂಗ್ರಹ, ಪ್ರತ್ಯೇಕ ಉಲ್ಲೇಖದ ವಿಭಾಗ ಹೊಂದಿದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೂಚಿಸಿದ ಪುಸ್ತಕಗಳ ಒಂದೊಂದು ಪ್ರತಿಯನ್ನು ಪುಸ್ತಕ ವಿಭಾಗದಲ್ಲಿ ಇರಿಸಲಾಗುವುದು. ಈ ಪುಸ್ತಕಗಳನ್ನು ಹೊರಗೆ ಕೊಡಲಾಗುವದಿಲ್ಲ. ಗ್ರಂಥಾಲಯದಲ್ಲಿ ಮಾತ್ರ ಉಪಯೋಗಿಸಬಹುದು. ಅತಿ ಬೇಡಿಕೆ ಇದ್ದರೆ ಒಂದು ರಾತ್ರಿಗಾಗಿ ಮಾತ್ರ ನೀಡಲಾಗುತ್ತದೆ.
 
ಪುಸ್ತಕ ಬ್ಯಾಂಕ್ ಯೋಜನೆ (Book Bank Scheme):
          ಮಹಾವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಪ್ರತ್ಯೇಕ ಪುಸ್ತಕ ಸಂಗ್ರಹವನ್ನು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಈ ಮೂಲಕ ಒದಗಿಸಲಾಗುತ್ತದೆ.
 
ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕ ವಿಭಾಗ (Competitive Examination Book Cell):
               ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ, ವಿದ್ಯಾರ್ಥಿಗಳಿಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಪುಸ್ತಕಗಳ ಪ್ರತ್ಯೇಕ ಸಂಗ್ರಹವನ್ನು ಎಲ್ಲಾ ಮಹಾವಿದ್ಯಾಲಗಳ ಗ್ರಂಥಾಲಯಗಳಲ್ಲಿ ನಿರ್ಮಿಸಲಾಗಿದೆ. ಭಾರತೀಯ ಕೃಷಿ ಅನುಸಂಧಾನ ಅಯೋಗ ನಡೆಸುವ JRF, SRF, ASRB ಮುಂತಾದ ಪರೀಕ್ಷೆಗಳಿಗೆ ಅವಶ್ಯವಿರುವ ಪುಸ್ತಕಗಳು ಲಭ್ಯವಿರುತ್ತವೆ.
 
 
ಡಿಜಿಟಲ್ ಸೇವೆಗಳು :
               ಇ-ಗ್ರಂಥ ಸಂಪನ್ಮೂಲಗಳು: ವಿಶ್ವವಿದ್ಯಾಲಯದ ಅಧೀನದಲ್ಲಿರುವ, ಶಿಕ್ಷಕರು, ವಿದ್ಯಾರ್ಥಿಗಳಿಗೆ, ಸಂಶೋಧನಾ ವಿಜ್ಞಾನಿಗಳಿಗೆ ಅಗತ್ಯವಿರುವ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಗ್ರಂಥಾಲಯದ ಮುಖ್ಯ ಉದ್ದೇಶ. ಕಾರಣ ಮುಖ್ಯ ಆವರಣದಲ್ಲಿರುವ ಸರ್ವಜ್ಞ ಗ್ರಂಥಾಲಯವು, ಅನೇಕ ಈ-ಗ್ರಂಥ ಸಂಪನ್ಮೂಲಗಳಿಗೆ ಚಂದದಾರರಾಗಿದೆ.
 
         ಕೃಷಿಯಲ್ಲಿ ಇ-ಗ್ರಂಥಗಳ ಸಂಪನ್ಮೂಲವಾಗಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ನಿಯತಕಾಲಿಕೆಗಳಿಂದ, ಕೃಷಿಗೆ ಸಂಬಂಧಪಟ್ಟ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.ಇ-ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಗ್ರಂಥಾಲಯಗಳಲ್ಲಿ ನಿರಂತರ ತರಬೇತಿಯನ್ನು ನೀಡಲಾಗುತ್ತದೆ.
 
ಕೃಷಿಕೋಶ:
           ಕೃಷಿಕೋಶವು ಪ್ರಬಂಧಗಳನ್ನು, ಹಿಂದಿನ ಮತ್ತು ಅಲಭ್ಯವಾದ ಪುಸ್ತಕಗಳ ಮತ್ತು ದಾಖಲೆಗಳ ಗಣಕೀಕೃತ ಆವೃತ್ತಿಯಾಗಿದೆ. ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ ಸಂಶೋಧನಾ ಕೇಂದ್ರ ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಿಂದ ಆಯ್ದ ಗ್ರಂಥಗಳು, ಸಂಶೋಧನಾ ಪ್ರಬಂಧಗಳು ಕೃಷಿ ಕೋಶದಲ್ಲಿ ಲಭ್ಯವಾಗುತ್ತವೆ, ಈಗಾಗಲೇ ನಮ್ಮ ವಿಶ್ವವಿದ್ಯಾಲಯದ 522 ಸಂಶೋಧನಾ ಪ್ರಬಂಧಗಳನ್ನು ಅಪ್ಲೋಡ್ ಮಾಡಲಾಗಿದೆ. ವಿಶ್ವವಿದ್ಯಾಲಯ ಗ್ರಂಥಾಲಯದಲ್ಲಿ ಕಿಂಡ್ಲ್ ಇ ಪುಸ್ತಕ ಓದುವ ಸಲಕರಣೆ ಅಳವಡಿಸಲಾಗಿದ್ದು, 1 ಮಿಲಿಯನ್ ಇ ಪುಸ್ತಕಗಳನ್ನು ಕಿಂಡ್ಲ್ ಅನ್ ಲಿಮಿಟೆಡ್ ಇ ಪುಸ್ತಕಗಳ ಮುಖಾಂತರ ಇ-ಪುಸ್ತಕ ಓದುವ ವ್ಯವಸ್ಥೆಯನ್ನು ಒದಗಿಸಲಾಗಿದೆ.
 
Radio Frequency Identification (RFID) ಅಳವಡಿಕೆ:
              ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯ ಆವರಣದ ಗ್ರಂಥಾಲಯದಲ್ಲಿ RFID ತಂತ್ರಜ್ಞಾನದ ಅಳವಡಿಕೆಯನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ. ಈ ತಂತ್ರಜ್ಞಾನದಿಂದಾಗಿ ಪುಸ್ತಕಗಳ ಸುಭದ್ರತೆ ಹೆಚ್ಚಾಗಿದೆ. ಐಡೆಂಟಿಟಿ ಕಾರ್ಡ್ ಅಥವಾ ಬೆರಳು ಗುರುತಿನಿಂದ ಪ್ರತಿಯೊಬ್ಬರೂ ತಾವೇ ಸ್ವತ: ಪುಸ್ತಕಗಳನ್ನು ಎರವಲು ಪಡೆಯಬಹುದು ಅಥವಾ ಹಿಂದಿರುಗಿಸಬಹುದು.
             ವಿಶ್ವವಿದ್ಯಾಲಯ ಗ್ರಂಥಾಲಯವು ವಿಶ್ವವಿದ್ಯಾಲಯ ಜಾಲತಾಣದ (https://uhsbagalkot.karnataka.gov.in/) ಹಾಗೂ ಇಮೇಲ್‍ಗಳ ಅಪಡೇಟ್ ಮತ್ತು ನಿರ್ವಹಣೆಯನ್ನು ಮಾಡುತ್ತಿದೆ.
ಎಮ್.ಎಸ್‍ಸಿ., ಹಾಗೂ ಪಿಹೆಚ್‍ಡಿ., ವಿಧ್ಯಾರ್ಥಿಗಳಿಗೆ Anti-plagiarism check ಪ್ರಮಾಣಪತ್ರವನ್ನು ವಿಶ್ವವಿದ್ಯಾಲಯ ಗ್ರಂಥಾಲಯದಿಂದ ಪ್ರಮಾಣೀಕರಿಸಲಾಗುತ್ತದೆ.


CeRA Orientation ProgrammeCeRA Orientation Programme

CeRA Orientation Programme
CeRA Orientation Programme

 

Facilities/Services


 • The library is stacked with text books, reference books, journals, PG theses etc.
 • University main campus Library is kept open from 9.00 a.m. to 7.00 p.m. on all working days except public holidays and from 9.00 a.m. to 5.00 p.m. on Saturdays & from 9.00 a.m. to 1.00 p.m. on Sundays.
 • Library has adopted open access system.
 • Readers can borrow 3 (students) and 5 (faculty) books at a time and keep them for a period of two week.
 • There is a concessional photo copying facility for students, which is kept open during library hours.
 • University Library has adopted open access system and Dewey decimal classification scheme.
 • Catalogue of Theses covering the period from 2010-11 to till date are in electronic form and being updated as and when necessary.
 • SYSTAT 13.0 Statistical Software is available at University Digital Library
 
Recent Developments in Sarvajna Library
 • Libraries at main campus and constituent college campuses are situated in separate premises and well equipped.
 • Separate reference collection is provided with addition 200 books, particularly on SRF/JRF and other Competitive exams.
 • 58 New subject journals being subscribed.
 • Ezproxy server is installed in the main campus Library to make access e–resources through remote at Sub- Campuses and HRS Station.
 • Separate collection of Kannada books pertaining to the Horticulture is provided for students and other visiting farmers.
 • Established Computer lab with 6 computers and connected with high speed internet through NKN to access E-Resources.
 • 50 annual reports were added along with collection of 5000+ books and 100 theses.
 • Regular orientation/training is given to PG and Ph.D. students on use of E-resources.
 • Reprographic, printing and scanning services are provided in the library for benefit of students.
 • Library has been automated using Slim21 software and as well as KOHA
 • Library is Connected with UPS Inverter
 • CCTV surveillance cameras has been installed in Library
 
E-Resources (CeRA) (Within Main Campus/LAN) Click here to login 
E-Resources (Remote Access) Click here to E-Resources (Remote Access) 

 Click here for SARVAJANA LIBRARY WEB OPAC  

 

Library Timings

1. Library Timings

Monday to Friday:09.00 am to 07.00 pm

Saturday: 09.00 am to 05.00 pm

 

2. Issue & Return of Books

Monday to Friday: 09.00 am to 05.00 pm

Saturday: 09.00 am to 01.00 pm

 

 

ಇತ್ತೀಚಿನ ನವೀಕರಣ​ : 13-12-2021 04:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080